Wednesday, May 23, 2007

talkಉ,ಟೀಕೆಗಳು ಮತ್ತು go go go.......ಗೋಸಮ್ಮೇಳನ.

ಗೋ ಸಮ್ಮೇಳನ ಅಷ್ಟೇ ಮುಗಿದಿತ್ತು. ಕಾರ್ಯಕರ್ತರಿಗೆ ಮಂತ್ರಾಕ್ಷತೆ ಕೊಡುವ ದಿನ ಶ್ರೀಗಳು ಹೇಳಿದ್ದಿಷ್ಟು.......ಮೊದಲ ಗೋ ಸಮ್ಮೇಳನ ನಿನ್ನೆಗೆ ಮುಕ್ತಾಯ. ಇವತ್ತಿನಿಂದ ಎರಡನೇ ಗೋಸಮ್ಮೇ್ನ ಆರಂಭವಾಯ್ತು ಅಂತ. ಅಂದರೆ ಗೋಸಮ್ಮೇಳನದ ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಆರಂಭ ಎಂಬುದು ಸೂಚ್ಯಾರ್ಥ. ಆಮೇಲಿನ ಬೆಳವಣಿಗೆಗಳನ್ನು ಗಮನಿಸಿದಾಗ ನನಗನ್ನಿಸಿದ್ದು ........... ಶ್ರೀಗಳು ಗೋಸಮ್ಮೇಳನದ ಆಶೋತ್ತರಗಳನ್ನು ನಡೆಸುವ ಜೊತೆಗೆ ಈ talkಉ,ಟೀಕೆಗಳನ್ನೂ ಎದುರಿಸಬೇಕು ಎಂದು. ನೋಡಿ, ಎಷ್ಟೊಂದು ಟೀಕೆಗಳು.....ಮಾತುಗಳು.......
ಬರಿಯ ಗೋಸಮ್ಮೇಳನ ಮಾತ್ರ ಯಾಕೆ? ಎಮ್ಮೆಗಳನ್ನು ಬಿಟ್ಟಿರೇಕೆ? ಕುರಿ, ಕೋಳಿ ಎಲ್ಲವು ಇದೆಯಲ್ಲಾ.......ಅಂತ ಕೊಂಕು ಬೇರೇ...........ಇವುಗಳು ಕೂಡಾ ಮನುಷ್ಯನಿಗೆ ಅನುಕೂಲಕರವಲ್ಲವೇ? ಅಂತ ಇವರ ವಾದ. ಒಪ್ಪಿಕೊಳ್ಳೋಣ, ಹೌದು. ಅವೆಲ್ಲವೂ ಅನುಕೂಲಕರವೇ ಸರಿ. ಆದರೆ ಒಂದು ಸಣ್ಣ ಸಮಸ್ಯೆ. ಒಬ್ಬ ಏಕಕಾಲದಲ್ಲಿ ಒಂದು ವಿಷಯವನ್ನು ಮಾತ್ರ ಸರಿಯಾಗಿ ನಿಭಾಯಿಸಬಹುದು. ಹಾಗಾಗಿ ಗೋವಿನ ವಿಷಯ ಮಾತ್ರ ಶ್ರೀಗಳು ಕೈಗೆತ್ತಿಕೊಂಡದ್ದು. ಯಾರೆಲ್ಲರಿಗೆ ಗೋವಿನ ಮೇಲೆ ಪ್ರೀತಿ ಇದೆಯೋ ಅವರೆಲ್ಲಾ ಕೈ ಜೋಡಿಸಬಹುದು. ಉಳಿದವರಿಗೆ ಉಳಿದ optionಗಳು open. ಉದಾ: ಎಮ್ಮೆಗಾಗಿ ಕೂಗು ಹಾಕುವವರು ಮಹಿಷೋದ್ದಾರಕ ಸಮ್ಮೇಳನ ಮಾಡಲಿ, ಕುರಿ ಕೋಳಿ "ಪ್ರಿಯ"ರಾದರೆ ಅವುಗಳದ್ದೇ ಸಮ್ಮೇಳನ. ಏನಂತೀರಿ??
"ರಾಘವೇಶ್ವರ"ರು ಪರಿಸರದ ಪಾಲಿನ "ಕೌರವೇಶ್ವರ"ರಾಗಬಾರದಿತ್ತು ಅಂತ ಒಬ್ಬರ ಅಂಬೋಣ. ಅಹಾ! ಏನು ಪ್ರಾಸ ನೋಡಿ.....ಕೇಳಲಿಕ್ಕೆ ಹೇಳಲಿಕ್ಕೆ ಬಹಳ ಚೆನ್ನಾಗಿದೆ. ನೋಡಿ, ಒಂದು ಮನೆಯಲ್ಲಿ ಸಣ್ಣ ಮದುವೆ ಕಾರ್ಯಕ್ರಮವಾದರೆ , ಸ್ವಲ್ಪ ಮಟ್ಟಿನ ಪರಿಸರ ಹಾನಿ ಖಂಡಿತ. ಹಾಗಿದ್ದಾಗ ಈ ರೀತಿಯ ದೊಡ್ಡ ಪ್ರಮಾಣದ ಕಾರ್ಯಕ್ರಮದಲ್ಲಿ ಅದು ಅನಿವಾರ್ಯ ಅಲ್ಲವೆ? ಹೀಗೆ ಟೀಕಿಸುವವರು ಇನ್ನೊಂದು ವಿಚಾರವನ್ನು ಪರಾಂಬರಿಸಬೇಕು. ಇದೇ ಶ್ರೀಗಳು ಒಂದು ಕೋಟಿ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂಬುದು.
ಒಂದೆಡೆ ಹಸು ಕಟುಕರ ಮನೆ ಸೇರುತ್ತಿದೆ, ಇನ್ನೊಂದೆಡೆ ಹಸುವಿಗೆ ಸುವರ್ಣ ತುಲಾಭಾರ ಅಂತ ಇನ್ನೊಬ್ಬ "ಕಟುಕ"ರ "ಕಟಕಿ". ಹೌದು, ಇಷ್ಟೂ ಮಾಡದಿದ್ದರೇ..........ಇನ್ನೂ ಎಷ್ಟೊಂದು ಗೋವುಗಳು ಕಸಾಯಿಖಾನೆಯ ಪಾಲಾಗುತ್ತಿದ್ದವೋ ಏನೋ? ಪತ್ರಿಕೆಯೊಂದರಲ್ಲಿ "ಕತ್ತೆಯಂತ ಗೋವು" ಅನ್ನುವ ಶೀರ್ಷಿಕೆಯಡಿ ಪ್ರಕಟವಾದ ಚಿತ್ರ ನಿಮಗೆಲ್ಲಾ ನಿನಪಿರಬಹುದು. ಆ ಹಸುವನ್ನು "ಗೋಸಂಜೀವಿನಿ" ಯೋಜನೆಯಡಿ ಕಸಾಯಿಖಾನೆಯಿಂದ ಪಾರುಮಾಡಿ ತಂದಿದ್ದು ಇದೇ ಶ್ರೀಗಳು. ಮಠದ ಯೋಜನೆಗಳ ಸಾರ್ಥಕ್ಯವನ್ನು ತೋರಿಸಲಿಕ್ಕೆ ಆ ಚಿತ್ರವೊಂದೇ ಸಾಕು.
ಇನ್ನು ಹವ್ಯಕ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ, ಒಡಕುಗಳಿವೆ, ಅವನ್ನೆಲ್ಲಾ ಪರಿಹರಿಸುವುದನ್ನು ಬಿಟ್ಟು ಈ ಗೋಸಮ್ಮೇಳನ ಯಾಕೆ? ಅನ್ನುವ ಪ್ರಶ್ನೆ. ವಿಷಯ ಸರಿ. ಆದರೆ ಯಾವ ಸಮಾಜಗಳಲ್ಲಿ ಸಮಸ್ಯೆಗಳಿಲ್ಲ? ಒಡಕುಗಳಿಲ್ಲ? ಎಲ್ಲಾ ಕಡೆಗಳಲ್ಲೂ ಇದ್ದೇ ಇದೆ. ಇಂತಹ ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಬೆಂಬಲಿಸುವುದು ಹವ್ಯಕರಾಗಿ ನಮ್ಮ ಕರ್ತವ್ಯ. ನಮ್ಮ ಸ್ವಾಮಿಗಳೇ ಇದನ್ನು ಮಾಡ್ತಿದ್ದಾರೆ ಅನ್ನುವುದು ನಮಗೆ ಒಂದು ಹೆಮ್ಮೆಯ ವಿಚಾರವಾಗಬೇಕು. ಅಷ್ಟಕ್ಕೂಇರುವ ಅನೇಕ ಸಮಸ್ಯೆಗಳನ್ನು create ಮಾಡಿಕೊಂಡದ್ದು ಯಾರು? ನಾವೇ ಅಲ್ವಾ? ( ನಮ್ಮ ಸಮಾಜದ ಸಮಸ್ಯೆಗಳ ಬಗ್ಗೆ ಇನ್ನೊಮ್ಮೆ ಬರೆದೇನು). ಪರಿಹಾರಗಳನ್ನು ಕೂಡಾ ನಾವೇ ಕಂಡುಕೊಳ್ಳಬಹುದು ತಾನೆ? ಎಲ್ಲ ಸಮಸ್ಯೆಗಳಿಗೂ ಸ್ವಾಮಿಗಳೇ ಪರಿಹಾರ ಸೂಚಿಸಬೇಕು ಅಂದ್ರೆ ಯಾವ ನ್ಯಾಯ?
"ಹವ್ಯಕ ಸಮಾಜ"ಕ್ಕೆ ಸೇರಿದವರಾದಾರಿಂದ(?) ಅನ್ನಿಸಿದ್ದನ್ನು ಹೇಳುವ "ಅಧಿಕಾರ" ತನಗಿದೆ ಎಂಬ "ಪ್ರಾಮಾಣಿಕ" ಅನಿಸಿಕೆ ಒಬ್ಬರದ್ದು. ಅಧಿಕಾರ ಜವಾಬ್ದಾರಿಯಿಂದ ಕೂಡಿದಾಗ ಅದಕ್ಕೊಂದು ಅರ್ಥ ಇರುತ್ತದೆ. ಯಾವ ಸಮಾಜಕ್ಕೆ ಸೇರಿದವನಾಗಿದ್ದರೂ ಹೇಳಿಕೆಗೆ ಬೆಲೆ ಇರುತ್ತದೆ. ಆದರೆ..."ಜವಾಬ್ದಾರಿ"ಯ ಹಿಂದೆ ಒಂದು "ಬೆ" ಇಟ್ಟುಕೊಂಡರೆ?? ಯಾವ ಅಧಿಕಾರಕ್ಕೂ ಕವಡೆ ಕಾಸಿನ ಕಿಮ್ಮತ್ತಿರುವುದಿಲ್ಲ ಅಲ್ವಾ??

ಇಷ್ಟೆಲ್ಲದರ ನಡುವೆ ನನ್ನದೊಂದು ಅನಿಸಿಕೆ , ಅಲ್ಲ ಶ್ರೀಗಳಲ್ಲಿ ಅರಿಕೆ-
ಜನ ಬರಿಯ ಮಾತಾಡಿದರೆ ಅಥವಾ ಮಾತಾಡದೇ ಇದ್ದರೂ ಏನು ಆಗುವುದಿಲ್ಲ. ಪ್ರಪಂಚದಲ್ಲಿ ನಡೆಯಬೇಕಾದದ್ದು ನಡೆಯುತ್ತಲೇ ಇರುತ್ತದೆ. ಆದರೆ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಜನ ಕೆಲಸಗಳನ್ನು ನಿಲ್ಲಿಸಿದರೆ?? ಹಾಗೆಯೇ ನೀವು ಈಗ ಈ ಕೆಲಸಗಳನ್ನು ನಿಲ್ಲಿಸಿದರೆ ಏನಾಗುತ್ತದೆ? ಅನೇಕ ಗೋವುಗಳು ಪ್ರಾಣ ಕಳೆದುಕೊಳ್ಳುತ್ತವೆ ಅಷ್ಟೆ. ಮಾತಾಡುವ ಜನ ಅವುಗಳನ್ನು ಉಳಿಸುವ ಕೆಲಸ ಮಾಡುವುದಿಲ್ಲ. ಅವರದ್ದೇನಿದ್ದರೂ ಮಾತಾಡುವ ಕೆಲಸ ಅಷ್ಟೇ. ಆದ್ದರಿಂದ ಗೋಸಂರಕ್ಷಣೆಯನ್ನು ನಿಲ್ಲಿಸಬಾರದು. ನಾವೆಲ್ಲಾ ನಿಮ್ಮ ಜೊತೆ ಕೈಜೋಡಿಸುತ್ತೇವೆ.
ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಶ್ರೀಗಳು ಏಕಾಂಗಿಯಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ನಮ್ಮ ಸರಕಾರ ಕೂಡಾ ನೆರವು ನೀಡುತ್ತಿರುವುದು ಸಂತೋಷದ ವಿಚಾರ. ನಾವೂ ಈ ಕೈಂಕರ್ಯದಲ್ಲಿ ಶ್ರೀಗಳವರ ಜೊತೆ ಕೈ ಜೋಡಿಸೋಣ. ಅದು ಸಾಧ್ಯವಿಲ್ಲ ಅಂತಾದರೆ.....atleast ಸುಮ್ಮನಿರೋಣ. ಒಳ್ಳೆಯ ಕೆಲಸ ಮಾಡುವವರಾದರೂ ಮಾಡಲಿ.


so..... go ..go..go.....ಗೋ ಸಮ್ಮೇಳನ.


ತಮ್ಮವ

ಸಾಇತಿ.