Wednesday, May 23, 2007

talkಉ,ಟೀಕೆಗಳು ಮತ್ತು go go go.......ಗೋಸಮ್ಮೇಳನ.

ಗೋ ಸಮ್ಮೇಳನ ಅಷ್ಟೇ ಮುಗಿದಿತ್ತು. ಕಾರ್ಯಕರ್ತರಿಗೆ ಮಂತ್ರಾಕ್ಷತೆ ಕೊಡುವ ದಿನ ಶ್ರೀಗಳು ಹೇಳಿದ್ದಿಷ್ಟು.......ಮೊದಲ ಗೋ ಸಮ್ಮೇಳನ ನಿನ್ನೆಗೆ ಮುಕ್ತಾಯ. ಇವತ್ತಿನಿಂದ ಎರಡನೇ ಗೋಸಮ್ಮೇ್ನ ಆರಂಭವಾಯ್ತು ಅಂತ. ಅಂದರೆ ಗೋಸಮ್ಮೇಳನದ ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಆರಂಭ ಎಂಬುದು ಸೂಚ್ಯಾರ್ಥ. ಆಮೇಲಿನ ಬೆಳವಣಿಗೆಗಳನ್ನು ಗಮನಿಸಿದಾಗ ನನಗನ್ನಿಸಿದ್ದು ........... ಶ್ರೀಗಳು ಗೋಸಮ್ಮೇಳನದ ಆಶೋತ್ತರಗಳನ್ನು ನಡೆಸುವ ಜೊತೆಗೆ ಈ talkಉ,ಟೀಕೆಗಳನ್ನೂ ಎದುರಿಸಬೇಕು ಎಂದು. ನೋಡಿ, ಎಷ್ಟೊಂದು ಟೀಕೆಗಳು.....ಮಾತುಗಳು.......
ಬರಿಯ ಗೋಸಮ್ಮೇಳನ ಮಾತ್ರ ಯಾಕೆ? ಎಮ್ಮೆಗಳನ್ನು ಬಿಟ್ಟಿರೇಕೆ? ಕುರಿ, ಕೋಳಿ ಎಲ್ಲವು ಇದೆಯಲ್ಲಾ.......ಅಂತ ಕೊಂಕು ಬೇರೇ...........ಇವುಗಳು ಕೂಡಾ ಮನುಷ್ಯನಿಗೆ ಅನುಕೂಲಕರವಲ್ಲವೇ? ಅಂತ ಇವರ ವಾದ. ಒಪ್ಪಿಕೊಳ್ಳೋಣ, ಹೌದು. ಅವೆಲ್ಲವೂ ಅನುಕೂಲಕರವೇ ಸರಿ. ಆದರೆ ಒಂದು ಸಣ್ಣ ಸಮಸ್ಯೆ. ಒಬ್ಬ ಏಕಕಾಲದಲ್ಲಿ ಒಂದು ವಿಷಯವನ್ನು ಮಾತ್ರ ಸರಿಯಾಗಿ ನಿಭಾಯಿಸಬಹುದು. ಹಾಗಾಗಿ ಗೋವಿನ ವಿಷಯ ಮಾತ್ರ ಶ್ರೀಗಳು ಕೈಗೆತ್ತಿಕೊಂಡದ್ದು. ಯಾರೆಲ್ಲರಿಗೆ ಗೋವಿನ ಮೇಲೆ ಪ್ರೀತಿ ಇದೆಯೋ ಅವರೆಲ್ಲಾ ಕೈ ಜೋಡಿಸಬಹುದು. ಉಳಿದವರಿಗೆ ಉಳಿದ optionಗಳು open. ಉದಾ: ಎಮ್ಮೆಗಾಗಿ ಕೂಗು ಹಾಕುವವರು ಮಹಿಷೋದ್ದಾರಕ ಸಮ್ಮೇಳನ ಮಾಡಲಿ, ಕುರಿ ಕೋಳಿ "ಪ್ರಿಯ"ರಾದರೆ ಅವುಗಳದ್ದೇ ಸಮ್ಮೇಳನ. ಏನಂತೀರಿ??
"ರಾಘವೇಶ್ವರ"ರು ಪರಿಸರದ ಪಾಲಿನ "ಕೌರವೇಶ್ವರ"ರಾಗಬಾರದಿತ್ತು ಅಂತ ಒಬ್ಬರ ಅಂಬೋಣ. ಅಹಾ! ಏನು ಪ್ರಾಸ ನೋಡಿ.....ಕೇಳಲಿಕ್ಕೆ ಹೇಳಲಿಕ್ಕೆ ಬಹಳ ಚೆನ್ನಾಗಿದೆ. ನೋಡಿ, ಒಂದು ಮನೆಯಲ್ಲಿ ಸಣ್ಣ ಮದುವೆ ಕಾರ್ಯಕ್ರಮವಾದರೆ , ಸ್ವಲ್ಪ ಮಟ್ಟಿನ ಪರಿಸರ ಹಾನಿ ಖಂಡಿತ. ಹಾಗಿದ್ದಾಗ ಈ ರೀತಿಯ ದೊಡ್ಡ ಪ್ರಮಾಣದ ಕಾರ್ಯಕ್ರಮದಲ್ಲಿ ಅದು ಅನಿವಾರ್ಯ ಅಲ್ಲವೆ? ಹೀಗೆ ಟೀಕಿಸುವವರು ಇನ್ನೊಂದು ವಿಚಾರವನ್ನು ಪರಾಂಬರಿಸಬೇಕು. ಇದೇ ಶ್ರೀಗಳು ಒಂದು ಕೋಟಿ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂಬುದು.
ಒಂದೆಡೆ ಹಸು ಕಟುಕರ ಮನೆ ಸೇರುತ್ತಿದೆ, ಇನ್ನೊಂದೆಡೆ ಹಸುವಿಗೆ ಸುವರ್ಣ ತುಲಾಭಾರ ಅಂತ ಇನ್ನೊಬ್ಬ "ಕಟುಕ"ರ "ಕಟಕಿ". ಹೌದು, ಇಷ್ಟೂ ಮಾಡದಿದ್ದರೇ..........ಇನ್ನೂ ಎಷ್ಟೊಂದು ಗೋವುಗಳು ಕಸಾಯಿಖಾನೆಯ ಪಾಲಾಗುತ್ತಿದ್ದವೋ ಏನೋ? ಪತ್ರಿಕೆಯೊಂದರಲ್ಲಿ "ಕತ್ತೆಯಂತ ಗೋವು" ಅನ್ನುವ ಶೀರ್ಷಿಕೆಯಡಿ ಪ್ರಕಟವಾದ ಚಿತ್ರ ನಿಮಗೆಲ್ಲಾ ನಿನಪಿರಬಹುದು. ಆ ಹಸುವನ್ನು "ಗೋಸಂಜೀವಿನಿ" ಯೋಜನೆಯಡಿ ಕಸಾಯಿಖಾನೆಯಿಂದ ಪಾರುಮಾಡಿ ತಂದಿದ್ದು ಇದೇ ಶ್ರೀಗಳು. ಮಠದ ಯೋಜನೆಗಳ ಸಾರ್ಥಕ್ಯವನ್ನು ತೋರಿಸಲಿಕ್ಕೆ ಆ ಚಿತ್ರವೊಂದೇ ಸಾಕು.
ಇನ್ನು ಹವ್ಯಕ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ, ಒಡಕುಗಳಿವೆ, ಅವನ್ನೆಲ್ಲಾ ಪರಿಹರಿಸುವುದನ್ನು ಬಿಟ್ಟು ಈ ಗೋಸಮ್ಮೇಳನ ಯಾಕೆ? ಅನ್ನುವ ಪ್ರಶ್ನೆ. ವಿಷಯ ಸರಿ. ಆದರೆ ಯಾವ ಸಮಾಜಗಳಲ್ಲಿ ಸಮಸ್ಯೆಗಳಿಲ್ಲ? ಒಡಕುಗಳಿಲ್ಲ? ಎಲ್ಲಾ ಕಡೆಗಳಲ್ಲೂ ಇದ್ದೇ ಇದೆ. ಇಂತಹ ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಬೆಂಬಲಿಸುವುದು ಹವ್ಯಕರಾಗಿ ನಮ್ಮ ಕರ್ತವ್ಯ. ನಮ್ಮ ಸ್ವಾಮಿಗಳೇ ಇದನ್ನು ಮಾಡ್ತಿದ್ದಾರೆ ಅನ್ನುವುದು ನಮಗೆ ಒಂದು ಹೆಮ್ಮೆಯ ವಿಚಾರವಾಗಬೇಕು. ಅಷ್ಟಕ್ಕೂಇರುವ ಅನೇಕ ಸಮಸ್ಯೆಗಳನ್ನು create ಮಾಡಿಕೊಂಡದ್ದು ಯಾರು? ನಾವೇ ಅಲ್ವಾ? ( ನಮ್ಮ ಸಮಾಜದ ಸಮಸ್ಯೆಗಳ ಬಗ್ಗೆ ಇನ್ನೊಮ್ಮೆ ಬರೆದೇನು). ಪರಿಹಾರಗಳನ್ನು ಕೂಡಾ ನಾವೇ ಕಂಡುಕೊಳ್ಳಬಹುದು ತಾನೆ? ಎಲ್ಲ ಸಮಸ್ಯೆಗಳಿಗೂ ಸ್ವಾಮಿಗಳೇ ಪರಿಹಾರ ಸೂಚಿಸಬೇಕು ಅಂದ್ರೆ ಯಾವ ನ್ಯಾಯ?
"ಹವ್ಯಕ ಸಮಾಜ"ಕ್ಕೆ ಸೇರಿದವರಾದಾರಿಂದ(?) ಅನ್ನಿಸಿದ್ದನ್ನು ಹೇಳುವ "ಅಧಿಕಾರ" ತನಗಿದೆ ಎಂಬ "ಪ್ರಾಮಾಣಿಕ" ಅನಿಸಿಕೆ ಒಬ್ಬರದ್ದು. ಅಧಿಕಾರ ಜವಾಬ್ದಾರಿಯಿಂದ ಕೂಡಿದಾಗ ಅದಕ್ಕೊಂದು ಅರ್ಥ ಇರುತ್ತದೆ. ಯಾವ ಸಮಾಜಕ್ಕೆ ಸೇರಿದವನಾಗಿದ್ದರೂ ಹೇಳಿಕೆಗೆ ಬೆಲೆ ಇರುತ್ತದೆ. ಆದರೆ..."ಜವಾಬ್ದಾರಿ"ಯ ಹಿಂದೆ ಒಂದು "ಬೆ" ಇಟ್ಟುಕೊಂಡರೆ?? ಯಾವ ಅಧಿಕಾರಕ್ಕೂ ಕವಡೆ ಕಾಸಿನ ಕಿಮ್ಮತ್ತಿರುವುದಿಲ್ಲ ಅಲ್ವಾ??

ಇಷ್ಟೆಲ್ಲದರ ನಡುವೆ ನನ್ನದೊಂದು ಅನಿಸಿಕೆ , ಅಲ್ಲ ಶ್ರೀಗಳಲ್ಲಿ ಅರಿಕೆ-
ಜನ ಬರಿಯ ಮಾತಾಡಿದರೆ ಅಥವಾ ಮಾತಾಡದೇ ಇದ್ದರೂ ಏನು ಆಗುವುದಿಲ್ಲ. ಪ್ರಪಂಚದಲ್ಲಿ ನಡೆಯಬೇಕಾದದ್ದು ನಡೆಯುತ್ತಲೇ ಇರುತ್ತದೆ. ಆದರೆ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಜನ ಕೆಲಸಗಳನ್ನು ನಿಲ್ಲಿಸಿದರೆ?? ಹಾಗೆಯೇ ನೀವು ಈಗ ಈ ಕೆಲಸಗಳನ್ನು ನಿಲ್ಲಿಸಿದರೆ ಏನಾಗುತ್ತದೆ? ಅನೇಕ ಗೋವುಗಳು ಪ್ರಾಣ ಕಳೆದುಕೊಳ್ಳುತ್ತವೆ ಅಷ್ಟೆ. ಮಾತಾಡುವ ಜನ ಅವುಗಳನ್ನು ಉಳಿಸುವ ಕೆಲಸ ಮಾಡುವುದಿಲ್ಲ. ಅವರದ್ದೇನಿದ್ದರೂ ಮಾತಾಡುವ ಕೆಲಸ ಅಷ್ಟೇ. ಆದ್ದರಿಂದ ಗೋಸಂರಕ್ಷಣೆಯನ್ನು ನಿಲ್ಲಿಸಬಾರದು. ನಾವೆಲ್ಲಾ ನಿಮ್ಮ ಜೊತೆ ಕೈಜೋಡಿಸುತ್ತೇವೆ.
ಒಂದು ಸರಕಾರ ಮಾಡಬೇಕಾದ ಕೆಲಸವನ್ನು ಶ್ರೀಗಳು ಏಕಾಂಗಿಯಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ನಮ್ಮ ಸರಕಾರ ಕೂಡಾ ನೆರವು ನೀಡುತ್ತಿರುವುದು ಸಂತೋಷದ ವಿಚಾರ. ನಾವೂ ಈ ಕೈಂಕರ್ಯದಲ್ಲಿ ಶ್ರೀಗಳವರ ಜೊತೆ ಕೈ ಜೋಡಿಸೋಣ. ಅದು ಸಾಧ್ಯವಿಲ್ಲ ಅಂತಾದರೆ.....atleast ಸುಮ್ಮನಿರೋಣ. ಒಳ್ಳೆಯ ಕೆಲಸ ಮಾಡುವವರಾದರೂ ಮಾಡಲಿ.


so..... go ..go..go.....ಗೋ ಸಮ್ಮೇಳನ.


ತಮ್ಮವ

ಸಾಇತಿ.

13 comments:

Unknown said...

ಜನರನ್ನು ಮೆಚ್ಚಿಸಲಿಕ್ಕೆ ಜನಾರ್ಧನನಿಂದಲೂ ಅಸಾಧ್ಯ. ಕೊನೇಯ ಪ್ಯಾರಾದ ವಿಚಾರಗಳು ಚೆನ್ನಾಗಿವೆ.

Harsha Bhat said...

ಕೈಲಾಗದವರು ಮೈ ಪರಚಿಕೊಳ್ತಾರೆ, ಕುಣಿಯಲು ಬರದವ್ರು ನೆಲ ಡೊ೦ಕು ಅ೦ತಾರೆ... ಇದೆಲ್ಲಾ ಇದ್ದಿದ್ದೇ.

Harsha Bhat said...

ಹಾ೦, ಹೇಳಲು ಮತೆ೯, ಬರಹ ತು೦ಬಾ ಚೆನ್ನಾಗಿದೆ

Vinayak G M said...

ಹರೇ ರಾಮ
ವಂದೇ ಗೋಮಾತರಮ್

ನಿಮ್ಮ ಲೇಖನ ಓದಿ ಬಹಳ ಸಂತೋಷವಾಹಿತು.. ಪರಮ ಪುಜ್ಯ ಶ್ರೀಗುರುದೇವರನ್ನು,ಅವರ ಮನದ ಆಸೆ,ಅವರ ದಿವ್ಯ ದೃಷ್ಟಿಯನ್ನು ಬಹಳ ಸಮಿಪದಿಂದ ಅರಿತಿರುವಂತಿದೆ.. ಕೃಪಯಾ ನಿಮ್ಮ ಹೆಸರು ಅಥವಾ
ಇ-ಮೈಲ್ ಬ್ಲಾಗ್ನಲ್ಲಿ ನೀಡಬೇಕೆಂದು ಪ್ರಾರ್ಥನೆ... ಜೊತೆಗೆ ನಿಮ್ಮ ಈ ಲೇಖನವನ್ನು ಪತ್ರಿಕೆಗಳಿಗೆ ಕಳುಹಿಸಬಹುದಲ್ಲವೇ????

ಇತಿ,

ವಂದೇ ಗೋಮಾತರಮ್
ಹರೇ ರಾಮ

Unknown said...

ºÁAiÀiï ¸Á¬Äw,

£ÀªÀĸÁÌgÀ, J¯Áè ZÉ£ÁßV §gÉ¢¢ÝÃj. zsÀ£ÀåªÁzÀUÀ¼ÀÄ. DzÀgÉ ¸Àé®à vÀªÀÄä ºÉ¸ÀgÀÄ ºÉüÉÆà zsÉÊAiÀiÁð£ÀÆ vÉÆùðAiÀÄ¥Àà. UÀÄgÀÄUÀ¼À PÁAiÀÄðPÀæªÀĪÀ£ÀÄß nÃQ¸ÀĪÀªÀgÀÄ ¤gÀĪÀÄä¼ÀªÁV ºÉ¸ÀgÀÄ ºÁQPÉƼÀÄîvÁÛgÉ. ¤ÃªÉÃPÉ CqÀUÀÄwÛÃj. E£ÉÆßAzÀÄ «µÀAiÀÄUÉÆvÁÛ.... «±Àé UÉÆà ¸ÀªÉÄäüÀ£À «gÉÆâüUÀ¼À ªÉÊAiÀÄQÛPÀ ªÀåQÛvÀé ¯ÁZÁgï JzÉÆÝÃVzÉ . JgÀqÀÄ ºÉArgÀ UÀAqÀ, JuÉÚ UÁrUÀ¼ÀÄ, zÀUÀ¯ï ¨ÁfUÀ¼ÀÄ ªÀiÁvÀæ UÉÆà ¸ÀªÉÄäî «gÉÆâü¸ÀÄwÛzÁÝgÉ. vÁPÀwÛgÀĪÀªÀgÀÄ ¸À¥ÉÇÃmïð ªÀiÁqÀÄwÛzÁÝgÉ. ºÁUÁV «gÉÆÃzsÀPÉÌ ¨É¯É E®èªÁVzÉ

J¤ ªÉ xÁåAPïì

Dgï.±ÀªÀiÁð. vÀ®ªÁl

ಅನು said...

ಹರೇ ರಾಮ.

ಈ ಬರಹದಲ್ಲಿ ನೀವು ಉಲ್ಲೇಖಿಸಿದ,ಜನರ ವಿವಿಧ ರೀತಿಯ ಮಾತುಗಳಿಗೆ ಸಮ್ಮೇಳನದಲ್ಲಿ ನಾನೂ ಕಿವಿಯಾಗಿದ್ದೆ.ಅಲ್ಲದೆ ಅವರಿಗೆ ನಿಮ್ಮಂತೆಯೇ ಪ್ರತಿಕ್ರಿಯಿಸಿದ್ದೆನೆನ್ನಲು ಸಂತೋಷವಾಗ್ತಿದೆ.ನಾನು ಅದನ್ನ ಅಲ್ಲೇ ಮರೆತು ಬಂದಿದ್ದೆ.ಆದ್ರೆ ನೀವು ಉತ್ತಮ ಬರಹದ ರೂಪ ಕೊಟ್ಟಿದ್ದೀರಿ.
ಮನದಾಳದಲ್ಲಿ ಮತ್ತೆ ಆ ದಿನಗಳ ನೆನಪು ಮಿಂಚಿದಂತಾಯ್ತು.
ಬಹಳ ಪರಿಣಾಮಕಾರಿಯಾದ ಬರಹ.

ಹರೇ ರಾಮ.

ಅನು said...

ಹರೇ ರಾಮ.

ಈ ಬರಹದಲ್ಲಿ ನೀವು ಉಲ್ಲೇಖಿಸಿದ,ಜನರ ವಿವಿಧ ರೀತಿಯ ಮಾತುಗಳಿಗೆ ಸಮ್ಮೇಳನದಲ್ಲಿ ನಾನೂ ಕಿವಿಯಾಗಿದ್ದೆ.ಅಲ್ಲದೆ ಅವರಿಗೆ ನಿಮ್ಮಂತೆಯೇ ಪ್ರತಿಕ್ರಿಯಿಸಿದ್ದೆನೆನ್ನಲು ಸಂತೋಷವಾಗ್ತಿದೆ.ನಾನು ಅದನ್ನ ಅಲ್ಲೇ ಮರೆತು ಬಂದಿದ್ದೆ.ಆದ್ರೆ ನೀವು ಉತ್ತಮ ಬರಹದ ರೂಪ ಕೊಟ್ಟಿದ್ದೀರಿ.
ಮನದಾಳದಲ್ಲಿ ಮತ್ತೆ ಆ ದಿನಗಳ ನೆನಪು ಮಿಂಚಿದಂತಾಯ್ತು.
ಬಹಳ ಪರಿಣಾಮಕಾರಿಯಾದ ಬರಹ.

ಹರೇ ರಾಮ.

Krishnakumar said...

tumba chenngi barediruviri. ondu olle kelasa yaradru maadalu hortre adke saavira adachane idde irattante.. adke enu madoke agalla bidi.. helovru saavra heltare.. avru heloke antane huttirodu...

Anonymous said...

kelavu janaru heluvudakkagiye irtaare avrige ade kelsa.. adkella naav tale kedskolloke agalla bidi.. nfact avru huttirode helodikkagi anno tara irtaare.. en helteera....

baraha tumba chennagide.. :)

Naina Sudarshan said...

ತುಂಬಾ ಒಳ್ಳೆಯ ಲೇಖನ. ಟೀಕಿಸುವ ಜನರಿಗೆ ಕೆಟ್ಟದ್ದಷ್ಟೇ ಕಣ್ಣಿಗೆ ಕಾಣಿಸುತ್ತದೆ. ಅಂತಹ ಜನರು ಮೊ ಸರಿನಲ್ಲಿ ಕಲ್ಲು ಹುಡುಕುವ ಕೆಲಸದಲ್ಲೇ ತಮ್ಮ ಜೀವನವನ್ನು ಸವೆಸುತ್ತಾರೆ. ಆದ್ದರಿಂದ ಅವರಿಗೆ ನಮ್ಮ ಗುರುಗಳು ಪ್ರತೀ ಮನೆಗೆ ಭೇಟಿ ಕೊಟ್ಟಾಗ ಅಲ್ಲೊಂದು ಗಿಡ ನೆಡುವ ಕಾರ್ಯಕ್ರಮ ಗೊತ್ತಿರಲಿಕ್ಕಿಲ್ಲ. ಅಂತಹ ಜನರೆಲ್ಲ ಈ ಲೇಖನವನ್ನು ಓದುವಂತಾಗಲಿ. ಧನ್ಯವಾದಗಳು ಸಾ(ಇ)ತಿಯವರೇ ..

bharath said...

hey good post! well written... vishayada bagge hechu mahiti illa. so no comments

Ragu Kattinakere said...

sama helide nodu... hyangatu dagadi...

Arun said...

girianna sakkattagi baradyala maaraya........