Tuesday, May 22, 2007

"ತೊದಲು ನುಡಿ"

ಮೊದಲೇ ಹೇಳಿಬಿಡುತ್ತೇನೆ, ನಾನು "ಸಾಇತಿ". ವೃತ್ತಿಯಿಂದ ಅಥವಾ ಪ್ರವೃತ್ತಿಯಿಂದ ನಾನು ಬರಹಗಾರನೇನಲ್ಲ. ಹಾಗಾದರೆ ಯಾಕೆ ಬರಿತೀರಿ ಅಂತೀರಾ??

ನಮ್ಮ ನಡುವೆ ಇರುವ ಅದೆಷ್ಟೋ ಜನರ ವಿಚಾರಗಳು ಉತ್ತಮವಾಗಿರುತ್ತವೆ. ಆದರೆ ಅದನ್ನು ಅವರು ವ್ಯಕ್ತಪಡಿಸಲಾರರು. ಅಂಥವರ ವಿಚಾರಗಳ ಮುಖವಾಣಿಯಾಗಲಿ ಅಂತ ನನ್ನ ಬ್ಲ್ಲಾಗನ್ನು ಆರಂಭಿಸಿದ್ದೇನೆ. ಮುಖ್ಯ್ಯವಾಗಿ ಉತ್ತಮ ವಿಚಾರಗಳನ್ನು ಎಲ್ಲರಿಗೂ ತಲುಪಿಸುವ ಕೆಲಸ ನನ್ನದು. ಯಾಗಗಳಲ್ಲಿ ಸ್ವೀಕರಿಸಿದ ಹವಿಸ್ಸನ್ನು ಇತರ ದೇವಾನುದೇವತೆಗಳಿಗೆ ತಲುಪಿಸುವ ಅಗ್ನಿಯಂತೆ ನನ್ನ ಕೆಲಸವನ್ನು ಮಾಡುತ್ತೇನೆ. ಹಾಗಾಗಿ ಇದು ಸಾಹಿತ್ಯಾಧ್ವರ. ಇವಲ್ಲದೇ,ನನ್ನ ವಿಚಾರಗಳು, ನೆನೆಪುಗಳು, ಅನುಭವಗಳು(?) ಮತ್ತು ವಿವಿಧ ಘಟನೆಗಳಿಗೆ ಸಂಬಂಧಿಸಿದ ನನ್ನ ಪ್ರತಿಕ್ರಿಯೆಗಳು ಕೂಡ ಇಲ್ಲಿರುತ್ತವೆ.

ಈ ಕೈಂಕರ್ಯದಲ್ಲಿ ನನ್ನ ಹೆಸರು, ವೃತ್ತಿ, ಪರಿಚಯ ಮುಂತಾದವೆಲ್ಲಾ ಅಪ್ರಸ್ತುತ ಅಂತ ಭಾವಿಸಿದ್ದೇನೆ.ಇನ್ನು ಅನುಭವಕ್ಕೆ ಬಂದರೆ, ಬಾಲ್ಯದಿಂದಲೆ, ಅಪ್ಪನ ಪ್ರೊತ್ಸಾಹದಿಂದ ಅನೇಕ ಪತ್ರಿಕೆಗಳನ್ನು ಓದುವ ಗೀಳನ್ನು ಬೆಳೆಸಿಕೊಂಡೆ. ಹಾಗೆಯೇ ಯಕ್ಷಗಾನದ ಆಸಕ್ತಿ ಭಾರತ , ರಾಮಾಯಣಗಳನ್ನು ಓದಿಸಿತು. ನಾನೇನು "ಭಾವನಾ"ಜೀವಿಯಲ್ಲ, "ಕಲ್ಪನಾ"ಜೀವಿಯೂ ಅಲ್ಲ. ಕವನಗಳು ದೇವ್ರಾಣೆ ಅರ್ಥ ಆಗೋಲ್ಲ. ಕಾದಂಬರಿಗಳು ಸ್ವಲ್ಪ ಮಟ್ಟಿಗೆ ಇಷ್ಟ, ಆದರೂ ಯಾವುದನ್ನೂ ಪೂರ್ತಿಯಾಗಿ ಓದಿಲ್ಲ.
ಯಾವುದೇ ಸಲಹೆ , ಸೂಚನೆಗಳಿಗೆ ಸ್ವಾಗತ.


ತಮ್ಮವ.....

ಸಾಇತಿ.

No comments: