Tuesday, May 22, 2007

"some"मर" camp"

ಈಗಿನ ಬೇಸಿಗೆ ರಜೆಯ ಬಹಳಷ್ಟು ಭಾಗವನ್ನು ಮಕ್ಕಳ ಕೈಯಿಂದ ನುಂಗುತ್ತಿರುವುದು ಇವುಗಳೇ.. ಅಜ್ಜ, ಅಜ್ಜಿಯ ಜೊತೆ ಕಳೆಯುವ ಅಮೂಲ್ಯ ಕ್ಷಣಗಳನ್ನು ಬಲವಂತವಾಗಿ ಕಸಿಯಲಾಗುತ್ತಿದೆ. ಪ್ರಕೃತಿಯ ಮಡಿಲಿನಲ್ಲಿ, ಕೆರೆಯಲ್ಲಿ ಎಮ್ಮೆಯ ಬಾಲ ಹಿಡಿದು ಈಜು ಕಲಿಯುವ, ಮರಕೋತಿ, ನೆಲಕೋತಿ, ಕೆರೆದಡ ಮುಂತಾದ ಆಟಗಳನ್ನಾಡುವ ಅಥವಾ ಮೂಳ್ಳಣ್ಣು, ನೇರಳೆ, ಹುಳಿಮಾವಿನಹಣ್ಣುಗಳನ್ನು ಸವಿಯುತ್ತಾ, ಮಣ್ಣಾಟ(ಛೆ! ಮತ್ತೆ ನೆನಪಾಗಿ ಹೊಟ್ಟೆ ಉರಿಸುತ್ತೆ) ಕಳೆಯುವ ಬೇಸಿಗೆಯ ರಜೆಯ ಮಜಾವನ್ನು ಹಾಳು ಮಾಡಿ, ಹಿಟ್ಲರನ death campಗಳಂತಹ ನಾಲ್ಕು ಗೋಡೆಗಳ ಮಧ್ಯದ someमरcamp ಗಳಲ್ಲಿ ಮಕ್ಕಳನ್ನು ಕೂಡಿಹಾಕಲಾಗುತ್ತದೆ. ಇವೆಲ್ಲದರ ಮಧ್ಯೆ ಈ sommur camp ಗಳು ಒಂದು ಧಂಧೆಯಾಗಿರುವುದು ಅಪಾಯಕಾರಿ.



ಈ ರೀತಿಯ ವಿಚಾರಗಳು ನನಗೆ ಹೊಳೆದದ್ದು, ನನ್ನ ಅಜ್ಜ ಹೇಳುತ್ತಿದ್ದ ಕಥೆ ಮೊನ್ನೆ ನೆನೆಪಿಗೆ ಬಂದಾಗ...........ಅಜ್ಜ ಕಥೆ ಹೇಳ್ತಿದ್ದ..............



"ತಮಾ, ದೇವತೆಗಳಿಗೆ ಮನುಷ್ಯರ ಮೇಲೆ ಅದೆಂತೋ ಒಂಥಾರಾ ಮಮಕಾರ, ಪ್ರೀತಿ. ಯಾವಾಗ್ಲೂ ನಮ್ಮ ನಡುವೇ ಓಡಾಡ್ತ ಇರ್ತ. ನಾವು ಏನೇ ಹೇಳಿರೂ "ತಥಾಸ್ತು" "ತಥಾಸ್ತು" ಅಂದುಬಿಡ್ತ. ಹಂಗಾಗಿ ನಾವು ಯಾವಾಗ್ಲು ಓಳ್ಳೇ ಮಾತಾಡಕು, ಓಳ್ಳೇ ವಿಚಾರನೇ ಮಾಡಕು. ಕೆಟ್ಟದ್ದನ್ನು ಆಲೋಚನೆ ಮಾಡಲಾಗ. ಮಾಡಿರೆ,,,,ಅದಕ್ಕೂ ತಥಾಸ್ತು ಹೇಳಿಬಿಡ್ತ" ಅಂತ.



ದೇವತೆಗಳು ತಥಾಸ್ತು ಅಂತ ಹೇಳ್ತಾರೆ ಎಂಬ ಅನಿವಾರ್ಯ(?) ಕಾರಣಕ್ಕಾದರೂ ನಾವು optimistic ಆಗಿರಬೇಕಾಗಿತ್ತು. ಹೀಗೆ ಕಥೆಗಳ ಮೂಲಕ ನಮಗೆ ವ್ಯಕ್ತಿತ್ವ ವಿಕಸನದ ಪಾಠ ಕಲಿಸಲಾಗುತ್ತಿತ್ತು. ದುರಂತ ಅಂದ್ರೆ ನಾವು ಇವುಗಳನ್ನ ಮರೆತಿದ್ದೇವೆ. ನಮ್ಮ ಮಕ್ಕಳನ್ನು , ಉಸಿರುಗಟ್ಟಿಸುವ , ಅವರ ಕ್ರಿಯಾಶೀಲತೆಯನ್ನು ಹಾಳುಮಾಡುವ, ಯಾರಿಗೋ ದುಡ್ಡು ಮಾಡಿಕೊಡುವ someमरcamp ಗಳಿಗೆ ಕಳಿಸುತ್ತೇವೆ. ಬೇಸಿಗೆ ಶಿಬಿರಗಳನ್ನು ಮಾಡುವವರಿಗೆ ದುಡ್ಡೇ "ದೊಡ್ಡಪ್ಪ". ನಮಗೋ ನಮ್ಮ ದೊಡ್ಡಪ್ಪಂದಿರೇ (ಹಿರಿಯರು) ಹೊರೆ. ಅದಕ್ಕೇ ಹೀಗೇ................................



ಸ್ವ ಇಚ್ಛಾಪ್ರಾರಬ್ದಕ್ಕೆ ಬೇರೆಯವರು ಏನು ಮಾಡಲಾದೀತು???....

1 comment:

bharath said...

hmm cant say i agree with u on this... not everyone living in big cities has a good "halli vatavarana" to turn to during the holidays.And not all summer camps are bad. Some adventure camps do take children to the wild, which however artificial it might be, give the city kids a taste of how life is outside their cities.

and btw,ajja ninge aa kathe yavaga helidno maraya?